ನೀ ಬರುವ ಸಮಯದಲಿ ಮಳೆಯು ಸುರಿಯುತಲಿರಲಿ
ಮಿಂಚಾಗಿ ನಿನ್ನ ಅಲೆಯು ನನ್ನ ಸೇರಲಿ
ಮನದ ಅಂಗಳ ತುಂಬಾ ನಿನ್ನ ನೆನಪಿನ ಬಳ್ಳಿ
ಚಿಗುರಿ ಟಿಸಿಲೊಡೆದು ಮನೆಗೆ ಹಬ್ಬಲಿ
ನಿನ್ನ ಮನದಲಿ ಮೂಡಿದ ಪ್ರೀತಿಯ ಮೊಗ್ಗು
ನನ್ನೆದೆಯ ಬನದಲ್ಲಿ ಹೂವಾಗಿ ಅರಳಲಿ.
ನೀ ಬರುವ ದಿಕ್ಕಿನಲಿ ನಲ್ಮೆಯ ಗಾಳಿಯು ಬೀಸಿ
ನನ್ನೀ ಬನವೆಲ್ಲಾ ಘಮಘಮಿಸಲಿ.
ನಿನ್ನ ಗೆಜ್ಜೆಯ ನಾದ ನನ್ನ ಕಿವಿಯಲಿ ಮೊಳಗಿ
ನನ್ನುಸಿರೇ ಗಾನದ ಹೊನಲಾಗಲಿ.
ನಿನ್ನ ಸವಿ ಮಾತುಗಳೆಲ್ಲ ಆಗಸದೆತ್ತರ ಏರಿ
ಅಲ್ಲೇ ಮೋಡಗಳಾಗಿ ನನ್ನೆಡೆಗೇ ಸುರಿಯಲಿ.
ನಿನ್ನ ನೆನಪುಗಳೆಲ್ಲಾ ಮಳೆಯ ಮುತ್ತುಗಳಾಗಿ
ಈ ಜಗದ ತುಂಬೆಲ್ಲಾ ಹೊಳೆಯಾಗಿ ಹರಿಯಲಿ.