Thursday, January 14, 2010

ಸಂಕ್ರಮಣ

ಕಳೆದು ಹೋದ ನಿನ್ನೆಗಳು ಬಂದು
ನನ್ನೆದೆಯ ಕದ ತಟ್ಟಿದಾಗ ಇನ್ನೂ ಮುಂಜಾವು.
ಕದತೆರೆದು ದೃಷ್ಟಿಹಾಯಿಸಿದುದ್ದಕ್ಕೂ
ಆಗಷ್ಟೆ ಹರಿದ ನಸು ಬೆಳಕಿಗೆ
ಅಂಗಳದ ತುಂಬಾ ಪಾರಿಜಾತ, ಜಾಜಿ, ಸೇವಂತಿಗೆ........
ಒಡಲ ತುಂಬಾ ಹೂವಿನದೇ  ಘಮ.

ಒಂದೊಂದು ಹೂವಿನದೂ ಒಂದೊಂದು ಮಾಟ
ಯಾವ ಮಾಯದಲ್ಲಿ ಇಳೆಗಿಳಿದವೋ ಅವು
ಎದೆಯಾಳದ ವರೆಗೂ ಸವಿಯಾದ ಕಂಪು .
ನೀರ ಹನಿಸಿದ್ದು ನಾನೇ ಎಂಬ ಜಂಭವಿಲ್ಲ
ನೀರ ಸತ್ವ ಹೀರುವ ಶಕ್ತಿ ಹೂವಿಗೆ.

ಎಲ್ಲಿಯ ನೆಲ ಎಲ್ಲಿಯ ಬೀಜ
ಯೋಚಿಸುತ್ತ ಕುಳಿತರೆ ಎಲ್ಲವು ಅಯೋಮಯ
ಇಂದು ಸಕ್ರಾಂತಿ ಹೊಸ ದಿನ ಹೊಸ ಘಳಿಗೆ.
ಸ್ನೇಹಿತರ ಮನೆ ಮನೆಗೆ ಸಿಹಿ ಹಂಚಬೇಕು
ಜೊತೆಗೆ ಹೂವಿನ ಘಮ ಕೂಡಾ

5 comments:

ಸಾಗರದಾಚೆಯ ಇಂಚರ said...

soopar
tumbaa chennagi barediddiraa

ಜಲನಯನ said...

ಕಳೆದುಹೋದ ನಿನ್ನೆಗಳು ನನ್ನೆದೆಯ ಕದ ತಟ್ಟಿದಾಗ ಇನ್ನೂ ಮುಂಜಾವು....ಬಹಳ ಒಳ್ಳೆಯ ಭಾವನಾ ತರಂಗವನ್ನ ಎಬ್ಬಿಸುತ್ತವೆ ಈ ಸಾಲುಗಳು...ಮುಂದೆ ಓದಿದಂತೆ..ಪ್ರಬುದ್ಧತೆ ಎದ್ದು ಕಾಣುತ್ತೆ....ಉಮಾ ರವರಿಗೆ.......ಅಭಿನಂದನೆಗಳು

SANTA said...

Umavatakka Good poem. odi khushipatte. Tumba dinagala nantara barahada moolaka bhetiyadaddu santosha.
Alliyoo Jaaji,Sevantige,Paarijata iveyo?

shivu.k said...

ಕವನ ತುಂಬಾ ಚೆನ್ನಾಗಿ ಬರೆದಿದ್ದೀರಿ. ಸರಳವಾಗಿ ಮತ್ತು ನೇರವಾಗಿರುವುದು ನನಗಿಷ್ಟವಾಯಿತು.

Uma Bhat said...

ಬ್ಲಾಗಿಗೆ ಬಂದು ನಾನು ಕವನ ಕಟ್ಟುವ ರೀತಿಗೆ ಪ್ರೋತ್ಸಾಹ ನೀಡಿದ ಇಂಚರ, ಜಲನಯನ, ವಸಂತ, ಹಾಗು ಶಿವು, ನಿಮಗೆ ಧನ್ಯವಾದಗಳು.
ಪ್ರೀತಿಯೊಂದಿಗೆ ಉಮಾ.