ಹಲೋ ....................,
ರೀ, ನಾನ್ರೀ........,
......................
ಮಗೂಗೆ ಹುಶಾರಿಲ್ಲ
..........................
ರಜವೆಲ್ಲಾ ಮುಗಿದ್ಹೋಗಿದೆ.
................................
ನೀವು ಹಿಂದಿನ ತಿಂಗಳವೇ
ಬರ್ತೀನೆಂದವರು ಬರಲೇ ಇಲ್ಲಾ
.................................
ಮನೆ ಬಾಡಿಗೆ ಇನ್ನೂ ಕಟ್ಟಿಯಾಗಿಲ್ಲಾ
......................................
ಮಾವನವರಿನ್ನೂ ಆಸ್ಪತ್ರೆಯಲ್ಲೇ ಇದ್ದಾರೆ.
...................................
ಏನು ಕೇಳಿಸ್ತಾ ಇದೆಯಾ?
................................
ಅತ್ತೆಯವರ ಔಷಧ ಮುಗಿದು ಹೋಗಿದೆ.
................................
ಜಲಜಳ ಸೀಮಂತ ಈ ವಾರವೇ.
...................................
ಅರವಿಂದನ ಫ್ಹೀಸ್ ಕಟ್ಟೋದಿದೆ.
ಇನ್ನೂ ಲೋನೂ ಸಿಕ್ಕಿಲ್ಲಾ.
.................................
ನನಗೂ ಇತ್ತೀಚೆಗೆ
ತುಂಬಾ ತಲೆ ಸುತ್ತುತ್ತಾ ಇದೆ.
ಹಲೋ, ಕೇಳಿಸ್ತಾ ಇಲ್ವೆ?
ಕೇಳಿಸ್ತಾ ಇದೆ,
ಕ್ರಿಕೆಟ್ ಮ್ಯಾಚ್ ನೋಡ್ತಾ ಇದ್ದೆ.
ನಿನ್ನ ಮಾತು ಮುಗೀತಾ?
ಫೋನ್ ಇಡ್ತೀನಿ.
ಯುಗಾದಿ ಹಬ್ಬ - ಥಟ್ ಅಂತ ಹೇಳಿ
2 days ago