ಮನೆಗಳು, ಮನೆಗಳು, ಮನೆಗಳು.
ಮಜಬೂತಾದ ಕಿಟಕಿ ಬಾಗಿಲುಗಳು.
ದಪ್ಪ ದಪ್ಪ ಸರಳುಗಳು,
ನಡುವೆ ಸಿಕ್ಕಿ ಹಾಕಿಕೊಂಡಿರುವ
ಸಾವಿರಾರು ತಲೆಬುರುಡೆಗಳು .
ಅವುಗಳ -
ನಡೆ ತಡೆದಿವೆ ಗೋಡೆಗಳು,
ಕೈಗಳ ಬಂಧಿಸಿವೆ ಕತ್ತಲುಗಳು,
ಬಾಯ ಬಿಗಿದಿವೆ ಬೀಗಗಳು,
ನಿಂತಲ್ಲೇ ಒದ್ದಾಟ ಗುದ್ದಾಟಗಳು.
ಅವುಗಳು -
ಹೊರ ಜಿಗಿಯಲು ನಡೆಸಿವೆ ಯುದ್ಧ ,
ಏನೋ ಮುರಿದ ಸದ್ದು,
ಅವು ಕಿಟಕಿ ಬಾಗಿಲುಗಳದೋ
ತಲೆಬುರುಡೆಗಳದೋ
ಅಂತೂ-
ತಪ್ಪಿಸಿಕೊಂಡ ತಲೆಬುರುಡೆಗಳು
ಓಡಿದವು ಕುಂಡಿಗೆ ಕಾಲುಹಚ್ಚಿ,
ದಿಕ್ಕೆಟ್ಟು ಕಂಡ ಕಂಡ ಕಡೆಗೆ,
ಕಾಲ್ತುಳಿತಕ್ಕೆ ಸಿಕ್ಕಿ ನುಜ್ಜು ಗುಜ್ಜಾಗಿ
ಹೋದವೆಷ್ಟೋ ಉಳಿದವೆಷ್ಟೋ
ಕೊನೆಗೂ -
ಕಿಟಕಿಯ ಸರಳುಗಳು,
ಬಾಗಿಲ ಚೌಕಗಳು,
ಗೋಡೆಗಳು ಎಲ್ಲಾ ಸೇರಿ,
ತಲೆಬುರುಡೆಗಳನ್ನೆಲ್ಲಾ ಎಳೆದೆಳೆದು,
ತಂದು ಪೇರಿಸಿಟ್ಟವು
ಮತ್ತೆ ಮನೆಯೊಳಗೆ.
Subscribe to:
Post Comments (Atom)
12 comments:
ಉಮಾ ಮೇಡಂ,
ತುಂಬಾ ಚೆನ್ನಾಗಿವೆ..... ಒಂಟಿತನ, ವ್ಯವಸ್ತೆ ಯನ್ನು ವ್ಯಂಗವಾಗಿ ಬರೆದ ಕವನ ಚೆನ್ನಾಗಿವೆ.... ಬರೆಯಿರಿ..... ಧನ್ಯವಾದಗಳು....
ಕವನ ಚೆನ್ನಾಗಿದೆ...ಹೀಗೇ ಬರೆಯುತ್ತಿರಿ...ಧನ್ಯವಾದಗಳು
ಉಮಾರವರೇ, ಬುರುಡೆಯನ್ನು ಓಡುವಂತೆ ಮಾಡುವ ವ್ಯವಸ್ಥೆಯ ನಿರಾಶಾವಾದದ ಹಿಂದೆಯೇ..ಬುರುಡೆಗಳು ಮೂಳೆಗಳು ಆಶಾವದದ ಪ್ರತೀಕವೆಂಬಂತೆ ಓಡಬಲ್ಲವು ಎಂದೂ ತಿಳಿಸಿದ್ದೀರಿ..ಚನ್ನಾಗಿ ಮಂಥಿಸಿದ್ದೀರಿ....
ವಾಸ್ತವಕ್ಕೆ ಕನ್ನಡಿ ಹಿಡಿವ ಕವನ ತುಂಬ ಚೆನ್ನಾಗಿದೆ. ನಮ್ಮ ವ್ಯವಸ್ಥೆಯ ವಿರುದ್ಧ ನಾವೆಷ್ಟೇ ಹೋರಾಡಿದರೂ, ಹೋರಾಡಲು ಯತ್ನಿಸಿದಿರೂ ನಾವೇ ಕಟ್ಟು ಕೊಂಡ ಗೋಡೆ, ಸರಳುಗಳ ಬೇಲಿ ನಮ್ಮನ್ನಾಚೆ ಬಿಡವು!! ನಿರಾಸವಾದಿಂದ ಆಶಾವಾದವೋ ಇಲ್ಲಾ ಆಶಾವಾದಿಂದ ನಿರಾಸೆಯತ್ತ ಓಟವೋ!!!??? ಏನೇ ಆದರೂ ಫಲ ಮಾತ್ರ ಶೂನ್ಯವೇ ಸರಿ ಅಲ್ಲವೇ?
ವಾಸ್ತವ ಪರಿಸ್ಥಿತಿಯನ್ನು ಚೆನ್ನಾಗಿ ತೋರಿಸುತ್ತಿದೆ ಕವನ
ಬರೆಯುತ್ತಿರಿ ಹೀಗೆಯೇ
ಪ್ರಿಯ ದಿನಕರ ಮೋಗೆರ, ಸುಬ್ರಮಣ್ಯ ಭಟ್ಟ, ಜಲನಯನ , ತೇಜಸ್ವಿನಿ ಹೆಗಡೆ, ಮತ್ತು ಇಂಚರ ನಿಮ್ಮ ಪ್ರೋತ್ಸಾಹಕ್ಕೆ ಧನ್ಯವಾದಗಳು.
ಪ್ರೀತಿಯೊಂದಿಗೆ
ಉಮಾ.
MADOM ISHTAVAAYTU KAVANA:)
ಪ್ರಿಯ
ಗೌತಮ್,
ಧನ್ಯವಾದಗಳು.
enu arta agta illan
hi hi
anybody gets this commetns
Post a Comment