Monday, March 8, 2010

ದೂರ ...................................ವಾಣಿ

ಹಲೋ ....................,
ರೀ, ನಾನ್ರೀ........,
......................
ಮಗೂಗೆ  ಹುಶಾರಿಲ್ಲ
..........................
ರಜವೆಲ್ಲಾ  ಮುಗಿದ್ಹೋಗಿದೆ.
................................
ನೀವು ಹಿಂದಿನ ತಿಂಗಳವೇ
ಬರ್ತೀನೆಂದವರು  ಬರಲೇ ಇಲ್ಲಾ
.................................
ಮನೆ ಬಾಡಿಗೆ  ಇನ್ನೂ  ಕಟ್ಟಿಯಾಗಿಲ್ಲಾ
......................................
ಮಾವನವರಿನ್ನೂ  ಆಸ್ಪತ್ರೆಯಲ್ಲೇ  ಇದ್ದಾರೆ.
...................................
ಏನು  ಕೇಳಿಸ್ತಾ ಇದೆಯಾ?
................................
ಅತ್ತೆಯವರ ಔಷಧ  ಮುಗಿದು ಹೋಗಿದೆ.
................................
ಜಲಜಳ ಸೀಮಂತ  ಈ ವಾರವೇ.
...................................
ಅರವಿಂದನ ಫ್ಹೀಸ್ ಕಟ್ಟೋದಿದೆ.
ಇನ್ನೂ ಲೋನೂ ಸಿಕ್ಕಿಲ್ಲಾ.
.................................
ನನಗೂ ಇತ್ತೀಚೆಗೆ
ತುಂಬಾ ತಲೆ ಸುತ್ತುತ್ತಾ ಇದೆ.
ಹಲೋ,  ಕೇಳಿಸ್ತಾ ಇಲ್ವೆ?

ಕೇಳಿಸ್ತಾ ಇದೆ,
ಕ್ರಿಕೆಟ್ ಮ್ಯಾಚ್ ನೋಡ್ತಾ ಇದ್ದೆ.
ನಿನ್ನ ಮಾತು ಮುಗೀತಾ?
ಫೋನ್  ಇಡ್ತೀನಿ.                                                                                     

32 comments:

sunaath said...

ಮಹಿಳಾ ದಿನಾಚರಣೆಯ ದಿನದಂದೇ, ಮಹಿಳೆಗೆ ಗಂಡನಿಂದ ಸಿಗುವ ಸ್ಪಂದನವನ್ನು ಚೆನ್ನಾಗಿ ತೋರಿಸಿದ್ದೀರಿ.
Brief and Devastating!
Happy Woman's Day ಎಂದು ಹೇಳಬಹುದೆ?

Dr.D.T.KrishnaMurthy said...

kavana chennaagide.Nimminda innoo hecchu barahagalu barali endu haaraisuttene.

PRAVEEN ಮನದಾಳದಿಂದ said...

ದೂರ..............ವಾಣಿ ಸಂಭಾಷಣೆ ಉತ್ತಮವಾಗಿದೆ. ಎಲ್ಲಾ ಗಂಡಸರೂ ಹಾಗೆ ಅಲ್ಲ ಕಣ್ರೀ,
(ಯಾಕಂದ್ರೆ ಕೆಲವರಿಗೆ ಕ್ರಿಕೆಟ್ ಇಷ್ಟ ಆಗೋಲ್ಲ!)

ಸಾಗರದಾಚೆಯ ಇಂಚರ said...

ಮಹಿಳಾ ದಿನಾಚರಣೆಯಂದೇ ಗಂಡನಿಗೆ ಇಂಥಹ ಉಪಚಾರವೇ?
ಒಳ್ಳೆಯ ಬರಹ
ಚೆನ್ನಾಗಿದೆ

ಮನಮುಕ್ತಾ said...

nice one.

ಸುಮ said...

ಅನೇಕ ಹೆಣ್ಣುಮಕ್ಕಳ ಪಾಡು ಇದೇ. ಒಳ್ಳೆಯ ಬರಹ.

ಶಂಭುಲಿಂಗ said...

ಚೆನ್ನಾಗಿದೆ ಸಂಭಾಷಣೆ... :)

ಶಿವರಾಮ ಭಟ್ said...

ಹೌದು ಪ್ರತಿಸ್ಪಂದನವಿಲ್ಲದ ಸಂಭಾಷಣೆ ಕೇವಲ ಭಾಷಣವಾಗುತ್ತದೆ. ಹತಾಶೆಯನ್ನು ಮೂಡಿಸುತ್ತದೆ.
ಕ್ರಿಕೆಟ್ ಮ್ಯಾಚ್ ಹೆಂಡತಿಯ ದೂರವಾಣಿ ಎರಡು ಮರುಪ್ರಸಾರವಾಗುತ್ತದೆ...highlights ಕೂಡ... ಆದರೆ "excitement" ಎಲ್ಲಿದೆಯೋ ಅಲ್ಲಿ ಗಮನ...

Anonymous said...

ondu tingalinde manege barade cricket nodtha iruva gandana hatra
oushadhi, aspatre,baadige innu eneno onde usurige helidre talenovu ibrigu bandu ee reeti agirbahudu alva?

ತೇಜಸ್ವಿನಿ ಹೆಗಡೆ- said...

ಅಕ್ಕ,

ಈ ಕ್ರಿಕೆಟ್‌ನಿಂದಲೇ ಮನುಷ್ಯರು (ವಿಶೇಷವಾಗಿ ಹುಡುಗರು, ಗಂಡಸರು) ಸೋಂಬೇರಿಗಳಾಗುತ್ತಿರುವುದು. ನಿಜವಾಗಲೂ ಇದೊಂದು ಮೂರ್ಖರ ಆಟವೇ ಸರಿ!.

ಚುರುಕಾಗಿದೆ ಕವನ.

ರವಿಕಾಂತ ಗೋರೆ said...

Chennaagide :-)

Creativity!! said...

ಬಹಳ ಚೆನ್ನಾಗಿದೆ

ಸೀತಾರಾಮ. ಕೆ. said...

ಎಲ್ಲೋ ಇದ್ದು ಹೆ೦ಡತಿ ಮಾತಿಗೆ ಕೇಳಿಸಿಕೊಳ್ಳದೆ ಹೂಒಗುಟ್ಟೋ ಅಭ್ಯಾಸ ನನಗಿದೆ. ಇದನ್ನ ಓದ್ಥಾ ಇದ್ದ ಹಾಗೇ ಬೆನ್ನು ಮುಟ್ಟಿ ನೋಡ್ಕೊಳ್ಳೋ ತರ ಆಯ್ತು.... ಇನ್ನಾದರೂ ಸುಧಾರಿಸಬೇಕು...

ಶಿವರಾಮ ಭಟ್ said...

ಅತ್ತೆ,
ದಾರ[ಹೆಂಡತಿ]ವಾಣಿ ದೂರು[ಕಂಪ್ಲೈಂಟ್] ವಾಣಿ ಯಾದರೆ ದೂರ... .ವಾಣಿ ಯಾಗುವುದು ನಿಜ.
ನಿರಾದಾರ[ಹೆಂಡತಿಯಿಲ್ಲದವ] ಬಿರಾದಾರ[ಬೀರನ್ನು ಹೆಂಡತಿಯಾಗಿ ಪಡೆದವನೇ ಬಿರಾದಾರ] ನಾದರೆ ಸರದಾರ [ ಹೆಂಡತಿಗೆ ಬಂಗಾರದ ಸರ ಕೊಟ್ಟವನು ]
ಶಿರಸ್ತೆದಾರ [ ಹೆಂಡತಿಯನ್ನು ತಲೆಯಮೇಲೆ ಇಟ್ಟುಕೊಂಡವನು] ಆಗುತ್ತಾನೆ.
ಶಿವಣ್ಣ

Raghu said...

hahaha... nice one..
Raaghu

Uma Bhat said...

ಸುನಾಥ್ ಅವರೇ,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ಪ್ರೀತಿಯಿಂದ
ಉಮಾ.

Uma Bhat said...

ಡಾ, ಕೃಷ್ಣಮೂರ್ತಿಯವರೇ,
ನಿಮ್ಮ ಮೆಚ್ಚುಗೆಗೆ ಹಾಗೂ ಹಾರೈಕೆಗೆ ಕೃತಜ್ಞತೆಗಳು.
ಪ್ರೀತಿಯಿಂದ
ಉಮಾ.

Uma Bhat said...

ಪ್ರವೀಣ್ ಅವರೇ,
ಎಲ್ಲಾ ಗಂಡಸರನ್ನೂ ಈ ಕವನದಡಿ ನೂಕಿದರೆ ಹೇಗೆ?
ಧನ್ಯವಾದಗಳು ಪ್ರತಿಕ್ರಿಯೆಗೆ.
ಪ್ರೀತಿಯಿಂದ
ಉಮಾ.

Uma Bhat said...

ಇಂಚರ ಅವರೇ,
ನಿಮ್ಮ ಮೆಚ್ಚುಗೆಗೆ
ಧನ್ಯವಾದಗಳು.
ಪ್ರೀತಿಯಿಂದ
ಉಮಾ.

Uma Bhat said...

ಮನಮುಕ್ತಾ ಅವರೇ,
ನಿಮ್ಮ ಮೆಚ್ಚುಗೆಗೆ
ಧನ್ಯವಾದಗಳು.
ಪ್ರೀತಿಯಿಂದ
ಉಮಾ.

Uma Bhat said...

ಸುಮಾ,
ನಿಮ್ಮ ಕಳಕಳಿಗೆ,
ಕೃತಜ್ಞತೆಗಳು.
ಪ್ರೀತಿಯಿಂದ
ಉಮಾ.

Uma Bhat said...

ಶಂಭುಲಿಂಗ ಅವರೇ
ನಿಮ್ಮ ಪ್ರತಿಕ್ರಿಯೆಗೆ
ಧನ್ಯವಾದಗಳು.
ಪ್ರೀತಿಯಿಂದ
ಉಮಾ.

Uma Bhat said...

ಶಿವಣ್ಣಾ,
excitement" ಎಲ್ಲಿದೆಯೋ ಅಲ್ಲಿ ಗಮನ...
ನಿಜವಾಗಿಯೂ ಸತ್ಯ.
ಪ್ರತಿಕ್ರಿಯೆಗೆ ಧನ್ಯವಾದಗಳು.
ಪ್ರೀತಿಯಿಂದ ಅತ್ತೆ.

Uma Bhat said...

Anonymous ಅವರೇ,
ದನ್ಯವಾದಗಳು.
ಪ್ರೀತಿಯಿಂದ
ಉಮಾ.

Uma Bhat said...

ಪ್ರಿಯ ತೇಜಸ್ವಿನಿ,
ನಿನ್ನ ಸಹಮತಕ್ಕೆ
ಧನ್ಯವಾದಗಳು.
ಪ್ರೀತಿಯಿಂದ
ಉಮಕ್ಕ.

Uma Bhat said...

ರವಿಕಾಂತ ಗೋರೆ ಹಾಗು Creativity!! ಅವರೇ,
ನಿಮ್ಮಮೆಚ್ಚುಗೆಗೆ
ಧನ್ಯವಾದಗಳು.
ಪ್ರೀತಿಯಿಂದ
ಉಮಾ.

Uma Bhat said...

ಸೀತಾರಾಮ. ಕೆ. ಅವರೇ
ನಿಮ್ಮ ನೇರ ಹಾಗು ಸರಳ ನುಡಿ
ನನಗೆ ತುಂಬಾ ಖುಷಿ ಕೊಟ್ಟಿತು.
ಧನ್ಯವಾದಗಳು ಪ್ರತಿಕ್ರಿಯೆಗೆ.
ಪ್ರೀತಿಯಿಂದ
ಉಮಾ.

Uma Bhat said...

ರಘು ಅವರೇ
ಮೆಚ್ಚುಗೆಗೆ
ಧನ್ಯವಾದಗಳು.
ಪ್ರೀತಿಯಿಂದ
ಉಮಾ.

Ramesha said...

Mahila dinacharaneyandu neevu idanna bardiddira... IPL shuruvago dina naanu nanna pratikriye baritha iddene...:-) nanna madadinu indu IPL shuru agatte anta yella maretubidabedi anta helidlu..idu yendigu mugiyada kathe ansatte...:-)

ಗೌತಮ್ ಹೆಗಡೆ said...

ವಿಷಯವನ್ನ ಹೇಳದೆಯೇ ಎಲ್ಲವನ್ನೂ ಹೇಳಿದ ರೀತಿ ಇಷ್ಟ ಆತು.:)

Deepasmitha said...

ಗಂಡಂದಿರು ಹೆಂಡತಿಯರ ಮಾತು ಕೇಳಿಸಿಕೊಳ್ಳುವುದಿಲ್ಲ ಎಂಬ ಮಾತು ಯಾವಾಗಲೂ ಕೇಳಿಬರುತ್ತದೆ. ಇದಕ್ಕೆ ನಾನೂ ಹೊರತಿಲ್ಲ ಬಿಡಿ (ಅಂತ ನನ್ನ ಹೆಂಡತಿಯ ಅಭಿಪ್ರಾಯ)

ಸುಧೇಶ್ ಶೆಟ್ಟಿ said...

Ashtu chennagi bareyuthiddavaru itteechege thumba aparoopa aagibittiralla... aadashtu bega bareyiri uma avare...