Wednesday, January 26, 2011

ಸ್ವಾಗತ

ಹೊಸ ವರುಷವೆ ಬಾ,
ಹೊಸ ಭಾವದಿ, ಹೊಸ ರಾಗದಿ, 
ಹೊಸ ಹರುಷದಿ ಬಾ. 


               ನವ ವಧುವಿನ ಲಜ್ಜೆಯಾಗಿ ಬಾ, 
               ಗೆಜ್ಜೆ ನಾದದ ಸವಿ ದನಿಯಾಗಿ ಬಾ.


ಸಜ್ಜನರ ಎದೆಯ ಹೆಜ್ಜೇನಾಗಿ ಬಾ,
ಹೆಜ್ಜೆ ಇಡುತ ಸಡಗರದಿ ಬಾ.


               ಮುಗ್ಧ ಮಗುವಿನ ನಗೆಯಾಗಿ ಬಾ,
               ಸ್ನಿಗ್ಧ ಭಾವದ ಒಲವಾಗಿ ಬಾ.

ಬಾನಿಂದ ಭುವಿಗೆ ಸುರಿವ ಧಾರೆಯಾಗಿ ಬಾ, 
ರಾಗ ತಾಳದ ತನನವಾಗಿ ಬಾ. 


               ಮೊಗ್ಗು ಬಿರಿವ ಸಂಭ್ರಮವಾಗಿ ಬಾ,
               ದುಂಬಿಯ ಝೇಂಕಾರವಾಗಿ ಬಾ. 


ಅಧರದ ಮಧುವಾಗಿ ಬಾ,
ಎದೆಯಿಂದ ಎದೆಗೆ ಹರಿವ ಹಾಡಾಗಿ ಬಾ.


               ಇನಿಯಳ ಪಿಸುಮಾತಾಗಿ ಬಾ, 
               ಬಾಳಿಗೆ ಚೈತನ್ಯವಾಗಿ ಬಾ.


ಕತ್ತಲನು ತೊಳೆವ ತಾರೆಯಾಗಿ ಬಾ, 
ಎತ್ತೆತ್ತಲೂ ನೀನೇ ನೀನಾಗು ಬಾ.  

8 comments:

Dr.D.T.Krishna Murthy. said...

ಹೊಸವರುಷದ ಸ್ವಾಗತ ಸ್ವಲ್ಪ ತಡವಾಯಿತೇನೋ.ಆದರೂ ಯುಗಾದಿಯಿನ್ನೂ ದೂರವಿದೆ ಬಿಡಿ.ಯುಗಾದಿಗೆ ಅಡ್ವಾನ್ಸ್ ಸ್ವಾಗತ ಎಂದುಕೊಳ್ಳೋಣ.ಕವನ ಇಷ್ಟವಾಯಿತು.

ಸಾಗರದಾಚೆಯ ಇಂಚರ said...

nimagoo tadavaagi Happy New Year
sundara kavana

sunaath said...

ಹೊಸ ವರ್ಷವು ಬಾಳಿಗೆ ಏನೆಲ್ಲ ಮಂಗಳವನ್ನು ತರಬೇಕೆನ್ನುವ ಭಾವವನ್ನು ಸೊಗಸಾಗಿ ಹೇಳಿದ್ದೀರಿ. ಉತ್ತಮ ಭಾವಗೀತೆ.

ಸುಧೇಶ್ ಶೆಟ್ಟಿ said...

Uma avare....

Hosa varushada shubhaashayagaLu:)

nimma "saagutha doora doora", "PayaNa" gaLanthaha lekhanagaLannu miss maadikoLLuttiddEne... anthaddE yenaadru bareeri pls :)

HegdeG said...

Istatu.

Raghu said...

Nice poem...
Raghu

ಸೀತಾರಾಮ. ಕೆ. / SITARAM.K said...

ಹೊಸ ವರ್ಷವೊಂದರ ಬರವನ್ನು ನೀರಿಕ್ಷಿಸುವ ಈದಿನ ತಮ್ಮ ವರುಷ ಹಳೆಯ ಈ ಕವಿತೆ ಓದುತ್ತಿರುವಂತೆ ಇಂದು ಇಡು ಪ್ರಸ್ತುತ ಅನಿಸಿತು. ಸುಂದರ ಸಾಲುಗಳಲ್ಲಿ ಮನಹಕ್ಕಿಯಾಗಿ ತೆರೆದು ಹೊಸವರ್ಷವನ್ನು ಬರಮಾಡಿಕೊಳ್ಳುವ ಈ ಕವಿತೆ, ನಿಜಕ್ಕೂ ಸುಂದರವಾಗಿದೆ.

ತೇಜಸ್ವಿನಿ ಹೆಗಡೆ said...

Nimma haadannu kELI nagu naguta badidde hosa varusha :) good one...