Wednesday, March 7, 2012

ದಾರಿ .........

ಎಷ್ಟು ದೊಡ್ಡ ದೊಡ್ಡ  ರಸ್ತೆಗಳು  ಅಕ್ಕ ಪಕ್ಕ ಮರಗಿಡಗಳು.
ತಂಪಾದ ಗಾಳಿ, ಒಮ್ಮೊಮ್ಮೆ ಹಿತವಾದ  ಬಿಸಿಲು.
ಕೆಲವೊಮ್ಮೆ  ಉರಿ ಬಿಸಿಲೂ. ಮಳೆ ಗಾಳಿಯೂ.

ಮಧ್ಯದಲ್ಲಿ   ಅಲ್ಲಲ್ಲಿ   ತಗ್ಗು,  ಹೊಂಡ,  ದಿನ್ನೆಗಳು.
ಇದು ಕಾಲು ದಾರಿಯೇನೋ ಅನ್ನುವ ಭಾವ.
ನಡೆದದ್ದು  ಅದೆಷ್ಟು  ದೂರವೋ..........................

ಮೈಲಿಗಲ್ಲೇ  ಇಲ್ಲದ ರಸ್ತೆ.
ಕಾಲಿನ ಕಸುವೇ  ಹೇಳ ಬೇಕು.
ನಡೆದ ದಾರಿ  ಎಷ್ಟು?  ನಡೆವ  ದೂರ  ಎಷ್ಟು ಎಂದು?

ಅಲ್ಲಲ್ಲಿ ಸಿಕ್ಕವರದ್ದೇ  ಜೊತೆ.
ಬಿಟ್ಟರೆ ಒಂಟಿ  ಪಯಣವೇ.
ಯಾರನ್ನೋ  ಸಿಕ್ಕವರ ಕೇಳಿದರೆ ಮುಂದೇನುಂಟು?

ಹೇಳುತ್ತಾರೆ  ಅವರವರ  ಅನುಭವ.
ಮುಂದೆ  ಸಿಗುವುದೇ  ದೊಡ್ಡ  ಬಯಲು.  ಅಲ್ಲಲ್ಲ  ಆಲಯ.
ಕೆಲವರು ಹೇಳುತ್ತಾರೆ.  ಈ ರಸ್ತೆಯೇ  ತುದಿ. ಮುಂದೆ   ಶೂನ್ಯ.......

ಯಾರಿಗೆ  ಗೊತ್ತು, ಮುಂದೇನುಂಟು ಮುಂದೇನಿಲ್ಲಾ  ಎಂದು
ನಾವೇ ನಡೆಯ ಬೇಕು. ನಾವೇ  ನೋಡ ಬೇಕು.
ನಾವೇ  ಸಾಯ ಬೇಕು  ಸ್ವರ್ಗ ಕಾಣಬೇಕು.


10 comments:

prabhamani nagaraja said...

ಸ್ವಾನುಭವದಿ೦ದಲೇ ಸತ್ಯ ಕಾಣಬೇಕೆನ್ನುವ ಆಶಯದ ಕವನ ಚೆನ್ನಾಗಿದೆ. ಅಭಿನ೦ದನೆಗಳು. ನನ್ನ ಬ್ಲಾಗ್ ಗೂ ಬನ್ನಿ.

sunaath said...

ಮೇಡಮ್,
ಜೀವನಪಥದ ವರ್ಣನೆಯನ್ನು ಸೊಗಸಾಗಿ ಕವನಿಸಿದ್ದೀರಿ.

ಚುಕ್ಕಿಚಿತ್ತಾರ said...

ಕೊನೆ ಗೊತ್ತಿಲ್ಲದ ಜೀವನದ ದಾರಿ ತನ್ನ ಅನುಭವಗಳಿ೦ದಲೇ ಅರ್ಥವನ್ನು ಪಡೆದುಕೊಳ್ಳುತ್ತದೆ.. ಚ೦ದದ ಕವನ..

Dr.D.T.Krishna Murthy. said...

ದಾರಿ ಒಬ್ಬೊಬ್ಬರದು ಒಂದೊಂದು ತರಹ.ಮುಂದೆ ಹೋದವರನ್ನು ಕೇಳೋಣವೆಂದರೆ "ಮರಳಿ ಬಂದವರಿಲ್ಲ,ವರದಿ ತಂದವರಿಲ್ಲ!!".ಚೆಂದದ ಕವನ .ಅಭಿನಂದನೆಗಳು.

ಸುಧೇಶ್ ಶೆಟ್ಟಿ said...

Ishta aayithu Uma avare...

Uma Bhat said...

ಪ್ರಭಾಮಣಿಯವರೇ, ಸುನಾಥ್ ಅವರೇ, ವಿಜಯಶ್ರೀಯವರೇ,ಕೃಷ್ಣಮೂರ್ತಿಯವರೇ, ಸುಧೇಶ್ ಅವರೇ,ನನ್ನ ಕವನಕ್ಕೆ ಪ್ರತಿಕ್ರಿಯಿಸಿದ ನಿಮಗೆಲ್ಲರಿಗೂ ಧನ್ಯವಾದಗಳು.

ಪ್ರೀತಿಯೊಂದಿಗೆ
ಉಮಾ.

prashasti said...

ಚೆನ್ನಾಗಿದೆ ಕವನ ಉಮಕ್ಕ . . ನಾಳೆ ಏನೆಂದು ತಿಳಿಯದಿದ್ದರೂ ಪಯಣ ನಿಲ್ಲದಲ್ಲ..ಗೊತ್ತು ಗುರಿ ಇರಲಿ, ಇಲ್ಲದಿರಲಿ, ನಮ್ಮ ಬಾಳಬಂಡಿಯೆಂತೂ ಕೊನೆವರೆಗೂ ನಿಲ್ಲದಲ್ಲ.. ಉತ್ತಮ ಆಶಯದ ಕವನ

ಸೀತಾರಾಮ. ಕೆ. / SITARAM.K said...

jeevanada tirulanna saralavvagi heliddiraa....

Shreepad Hegde Salkod said...

ಬದುಕಿನ ಪಯಣ ಅನುಭವಗಮ್ಯವೆಂಬ ಮಾತು ನೈಜ ಸತ್ಯವೆಂಬುದನ್ನು ಮತ್ತೊಮ್ಮೆ ಸಾರಿರುವ ನಿನ್ನ ಕವನ ಚೆನ್ನಾಗಿದೆ. ಮುಂದುವರಿಸು ಬರೆಹದ ನಿನ್ನ ಸುಂದರ ಪಯಣವನ್ನು.

prashasti said...

ನಿಮ್ಮೆಲ್ಲರ ಮೆಚ್ಚುಗೆ ಮತ್ತು ಪ್ರೋತ್ಸಾಹಕ್ಕೆ ಚಿರಋಣಿ ನಾನು. ಮತ್ತೊಮ್ಮೆ ತುಂಬು ಹೃದಯದ ಧನ್ಯವಾದಗಳು