Wednesday, September 8, 2010

ಸವಿಗನಸು



ನೀ ಬರುವ ಸಮಯದಲಿ ಮಳೆಯು ಸುರಿಯುತಲಿರಲಿ
ಮಿಂಚಾಗಿ ನಿನ್ನ  ಅಲೆಯು   ನನ್ನ ಸೇರಲಿ

ಮನದ ಅಂಗಳ ತುಂಬಾ ನಿನ್ನ ನೆನಪಿನ  ಬಳ್ಳಿ
ಚಿಗುರಿ ಟಿಸಿಲೊಡೆದು ಮನೆಗೆ ಹಬ್ಬಲಿ

ನಿನ್ನ ಮನದಲಿ ಮೂಡಿದ  ಪ್ರೀತಿಯ  ಮೊಗ್ಗು
ನನ್ನೆದೆಯ ಬನದಲ್ಲಿ  ಹೂವಾಗಿ  ಅರಳಲಿ.

ನೀ ಬರುವ  ದಿಕ್ಕಿನಲಿ  ನಲ್ಮೆಯ ಗಾಳಿಯು ಬೀಸಿ
ನನ್ನೀ  ಬನವೆಲ್ಲಾ ಘಮಘಮಿಸಲಿ.

ನಿನ್ನ  ಗೆಜ್ಜೆಯ ನಾದ ನನ್ನ ಕಿವಿಯಲಿ ಮೊಳಗಿ
ನನ್ನುಸಿರೇ ಗಾನದ ಹೊನಲಾಗಲಿ.

ನಿನ್ನ ಸವಿ ಮಾತುಗಳೆಲ್ಲ ಆಗಸದೆತ್ತರ ಏರಿ
ಅಲ್ಲೇ ಮೋಡಗಳಾಗಿ  ನನ್ನೆಡೆಗೇ  ಸುರಿಯಲಿ.

ನಿನ್ನ  ನೆನಪುಗಳೆಲ್ಲಾ  ಮಳೆಯ ಮುತ್ತುಗಳಾಗಿ
ಈ ಜಗದ ತುಂಬೆಲ್ಲಾ ಹೊಳೆಯಾಗಿ ಹರಿಯಲಿ.

14 comments:

ಮನಮುಕ್ತಾ said...

ಚೆ೦ದದ ಸಿಹಿ ಕನಸು... ಸೊಗಸಾದ ಸಾಲುಗಳು..

ಸಾಗರದಾಚೆಯ ಇಂಚರ said...

ನಿವೇದಿತಾ

ಕೆಳಗಿನ ಸಾಲುಗಳು ಎಷ್ಟು ಮಧುರಾ

ನಿನ್ನ ಸವಿ ಮಾತುಗಳೆಲ್ಲ ಆಗಸದೆತ್ತರ ಏರಿ
ಅಲ್ಲೇ ಮೋಡಗಳಾಗಿ ನನ್ನೆಡೆಗೇ ಸುರಿಯಲಿ.

ನಿನ್ನ ನೆನಪುಗಳೆಲ್ಲಾ ಮಳೆಯ ಮುತ್ತುಗಳಾಗಿ
ಈ ಜಗದ ತುಂಬೆಲ್ಲಾ ಹೊಳೆಯಾಗಿ ಹರಿಯಲಿ

ಅಭಿನಂದನೆಗಳು

ಆನಂದ said...

ಕವಿತೆಯ ತುಂಬಾ ಪ್ರೀತಿಯ ಘಮವಿದೆ

sunaath said...

ಸವಿಗನಸು ತುಂಬಾ ಸಿಹಿಯಾಗಿದೆ!

ಸುಧೇಶ್ ಶೆಟ್ಟಿ said...

tumba chennagi barediddeera umakka... ishtavaayithu yella saalugaLu..

shridhar said...

ಉಮಕ್ಕ ..
ತುಂಬ ಮಧುರವಾದ ಕವಿತೆ .. ಸವಿಗನಸು ಚೆನ್ನಾಗಿದೆ ..

ಸೀತಾರಾಮ. ಕೆ. / SITARAM.K said...

ಕವನ ಮುದ್ದಾಗಿದೆ. ಜೊತೆಗೆ ಒಪ್ಪವಾದ ಚಿತ್ರ. ಕೊನೆಯ ನಾಲ್ಕು ಸಾಲುಗಳಲ್ಲಿಣ ಆಶಯ ತುಂಬಾ ಆಪ್ತತೆಯಿಂದ ಕೂಡಿದೆ.

ಶಿವರಾಮ ಭಟ್ said...

ನೀ ಬರುವ ಸಮಯದಲಿ ಮಳೆಯು ಬರದಿರಲಿ
ಮೋಡಗಳು ಚೆದುರಿ ರವಿ ತೇಜ ಬೆಳಗಿರಲಿ
ಶುಭ್ರಾನ್ತರಿಕ್ಷವಿರೆ ಉಡ್ಡಯನ ಸೊಗಸು
ಮುಂಜಾವು ಅನುಜೆಯಾ ಕಾಣುವಾ ಸೊಗಸು

ಕಾದಿರಲು ಕಳೆದಿಹುದು ವರ್ಷ ವಸಂತ
ಮಾತೆಯ ಮನವಿದೋ ಮಿಡಿಯುತಿದೆ ಅನಂತ
ಭಾವನೆಯು ಚಿಮ್ಮಿ ಶಬ್ದಗಳ ಸಾಲು
ಶೃಂಗಾರವಾಗಿದೆ ಅತ್ತೆಯಾ ಬ್ಲಾಗು

ದಿನಕರ ಮೊಗೇರ said...

ಉಮಾ ಮೇಡಮ್,
ತುಮ್ಬಾ ಸೊಗಸಾಗಿದೆ..... ನೀವು ಹರಸಿದ ಹಾಗೆ ನಿಮ್ಮೆಲ್ಲಾ ಕನಸು ಸವಿಗನಸುಗಳು ನಿಜವಾಗಲಿ..... ಎಲ್ಲಾ ಸಾಲುಗಳು ಸೊಗಸಾಗಿದೆ....

ನನ್ನ ಬ್ಲೊಗಿಗೆ ಬನ್ನಿ ಒಂದು ಕಥೆ ಬರೆಯುವ ಪ್ರಯತ್ನ ಮಾಡಿದ್ದೇನೆ....

GGHEGDE said...

Aha,bahaladinagala nantara hosa nivedanege dhanyavadagalu Umakka.....
sogasina salugalige vandane.Matte kaleduhoguvudilla tane?

V.R.BHAT said...

ಕವನ ಹಾಗೊ ಕನಸು ಎರಡೊ ಬಲುಸೊಗಸು. ನಿಮಗೆ ಹಲವು ನೆನಕೆಗಳು

ಚಿನ್ಮಯ ಭಟ್ said...

ಹೊಸ ವಸಂತದ ಬರವಿನ ಮಾವಿನ ಗಿಡದಂತೆ,ನವ್ಯ ಭಾವವನ್ನು ಸ್ವಾಗತಿಸುತ್ತಿದೆ!!!!

ಬನ್ನಿ ನಮ್ಮನೆಗೂ
http://chinmaysbhat.blogspot.com

ಓ ಮನಸೇ, ನೀನೇಕೆ ಹೀಗೆ...? said...

ತುಂಬಾ ಚೆಂದದ ಕವಿತೆ ಉಮಾ. ಬಹಳ ಇಷ್ಟವಾಯ್ತು.

Uma Bhat said...

ಆತ್ಮೀಯವಾಗಿ ಪ್ರತಿಕ್ರಯಿಸಿದ ನಿಮಗೆಲ್ಲರಿಗೂ ಧನ್ಯವಾದಗಳು